PM Kisan: ಕೋಟಿ ಕೋಟಿ ರೈತರಿಗೆ ಗುಡ್ ನ್ಯೂಸ್! ಶೀಘ್ರದಲ್ಲೇ ಪಿಎಂ ಕಿಸಾನ್ ಯೋಜನೆಯ​ ಹಣ ಹೆಚ್ಚಳ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM kisan Samman) ನೀತಿ ಯೋಜನೆಯಡಿ ಲಾಭ ಪಡೆಯುವ ಕೋಟ್ಯಂತರ ರೈತ (Farmers) ರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ (Good News) ಸಿಗುವ ನಿರೀಕ್ಷೆಯಿದೆ.

ಇದರರ್ಥ ಸರ್ಕಾರ ಶೀಘ್ರದಲ್ಲೇ ಈ ಯೋಜನೆಯಡಿ ರೈತರಿಗೆ ನೀಡುವ ಮೊತ್ತವನ್ನು ಹೆಚ್ಚಿಸಬಹುದು. 

ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6000 ರೂಪಾಯಿ ಸಿಗುತ್ತೆ. ಪ್ರತಿ ವರ್ಷ ರೈತರಿಗೆ 4 ತಿಂಗಳ ಮಧ್ಯಂತರದಲ್ಲಿ ತಲಾ ರೂ. 2000 ಮೂರು ಸಮಾನ ಕಂತುಗಳನ್ನು ನೀಡಲಾಗುತ್ತದೆ. 

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಿಗೆ ಸಂಯೋಜಿತವಾಗಿರುವ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನಾ ರ್ಯಾಲಿಯನ್ನು ನಡೆಸಿತು.

ಪ್ರಧಾನಮಂತ್ರಿ ಕಿಸಾನ್  ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕವಾಗಿ ಮೂರು ಸಮಾನ ಕಂತುಗಳಲ್ಲಿ ನೀಡಲಾಗುವ ನಿಧಿಯ ಮೊತ್ತವನ್ನು ಹೆಚ್ಚಿಸುವುದು ಭಾರತೀಯ ಕಿಸಾನ್ ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. 

ಪ್ರಸ್ತುತ ರೂ.6000 ಇರುವ ಈ ಆರ್ಥಿಕ ನೆರವನ್ನು ರೂ.2,000ದಿಂದ ರೂ.8,000ಕ್ಕೆ ಹೆಚ್ಚಿಸಬೇಕು ಎಂಬುದು ಬಿಕೆಎಸ್ ನ ಪ್ರಮುಖ ಬೇಡಿಕೆಯಾಗಿದೆ.

ರೈತರ ಖಾತೆಗೆ ಇದುವರೆಗೆ 12 ಕಂತುಗಳ ಹಣ ಜಮಾ ಆಗಿದ್ದರೆ, 13ನೇ ಕಂತು ಈ ತಿಂಗಳ ಅಂತ್ಯದೊಳಗೆ (January, 2023) ರೈತರ ಬ್ಯಾಂಕ್ ಖಾತೆಗೆ ಜಮೆಯಾಗುವ ನಿರೀಕ್ಷೆಯಿದೆ. 

For Latest update about pm kisan 13th installment click the given below link.