ಈ ದಿನ ರೈತರ ಖಾತೆ ಸೇರುವುದು ಪಿಎಂ ಕಿಸಾನ್‌ನ 12 ನೇ ಕಂತು

ಕಳೆದ ಬಾರಿ ಆಗಸ್ಟ್ ಎರಡನೇ ವಾರದಲ್ಲಿ ರೈತರ ಖಾತೆಗೆ ಕಂತಿನ ಹಣ ಬಂದಿತ್ತು.

 ಆದರೆ, ಈ ಬಾರಿ ಈ ಕಂತು ಯಾವಾಗ ಬರುತ್ತದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. 

ಈ ಮೊದಲು ಯೋಜನೆಯ 12 ನೇ ಕಂತು ಸೆಪ್ಟೆಂಬರ್‌ನಲ್ಲಿ ಬರಲಿದೆ ಎಂದು ಹೇಳಲಾಗುತ್ತಿ ತ್ತು. ಆದರೆ ಇದೀಗ ಪಿಎಂ ಕಿಸಾನ್ ಯೋಜನೆಯ 12ನೇ ಕಂತು ಅಕ್ಟೋಬರ್‌ನಲ್ಲಿ ರೈತರ ಖಾತೆ ಸೇರಲಿದೆ ಎಂದು ಹೇಳಲಾಗುತ್ತಿದೆ. 

ಹೊಸ ಪಟ್ಟಿ ಸಿದ್ಧಪಡಿಸಿದ ನಂತರ ಈ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು. 

ಇನ್ನು ಉತ್ತರಪ್ರದೇಶದಲ್ಲಿ ಇದುವರೆಗೆ ನಡೆಸಿದ ಸಮೀಕ್ಷೆಯಲ್ಲಿ 21 ಲಕ್ಷ ರೈತರು ಈ ಯೋಜನೆಗೆ ಅನರ್ಹರು ಎಂದು ಗುರುತಿಸಲಾಗಿದೆ.

 ಕೇಂದ್ರ ಸರ್ಕಾರದ ಯೋಜನೆಯಡಿ  ಅರ್ಹ ರೈತರಿಗೆ  ಸವಲತ್ತುಗಳನ್ನು ನೀಡಲಾಗುತ್ತಿದ್ದು, ದೂರು ಸ್ವೀಕರಿಸಿದ ನಂತರ ತನಿಖೆ ಆರಂಭಿಸಲಾಗಿದೆ.

ಇನ್ನು  77 ಸಾವಿರ ಮೃತ ರೈತರ ಖಾತೆಗಳಿಗೆ ಹಣ ರವಾನೆಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಇದಲ್ಲದೇ ಲಕ್ಷಾಂತರ ಅನರ್ಹ ರೈತರೂ ಯೋಜನೆಯ ಲಾಭ ಪಡೆಯುತ್ತಿರುವುದು ಕೂಡಾ ಗಮನಕ್ಕೆ ಬಂದಿದೆ.

ಈ ರೀತಿ ಯೋಜನೆಯ ಹಣವನ್ನು ಪಡೆದಿರುವ ಅನರ್ಹ ರೈತರಿಂದ ಮುಂದಿನ ದಿನಗಳಲ್ಲಿ ವಸೂಲಿ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. 

इसी प्रकार से पीएम किसान योजना की लेटेस्ट खबर प्राप्त करने के लिए निचे दी गयी लिंक पर क्लिक करें.