ಪಿಎಂ ಕಿಸಾನ್ 12 ನೇ ಕಂತಿಗೆ ಸಂಬಂಧಿಸಿದಂತೆ ಸರ್ಕಾರದ ದೊಡ್ಡ ಬದಲಾವಣೆ

ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ (ಪಿಎಂ ಕಿಸಾನ್) ಪ್ರಮುಖ ಬದಲಾವಣೆ ಮಾಡಲಾಗಿದೆ. ಈಗ ನಿಮ್ಮ ಆಧಾರ್ ಸಂಖ್ಯೆಯಿಂದ ಫಲಾನುಭವಿಯ ಸ್ಟೇಸ್‌ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

ಇದರರ್ಥ ನೀವು ಈ ಮೊದಲು ಆಧಾರ್ ಸಂಖ್ಯೆಯನ್ನು ನಮೂದಿಸಿದ ತಕ್ಷಣ ನಿಮ್ಮ ಸ್ಟೇಟಸ್‌ ಸುಲಭವಾಗಿ ನೋಡಬಹುದಿತ್ತು, ಆದರೆ ಇನ್ಮುಂದೆ ಹಾಗಾಗುವುದಿಲ್ಲ. 

 ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಪಿಎಂ ಕಿಸಾನ್ 12 ನೇ ಕಂತಿನ ಸ್ಥಿತಿಯನ್ನು ನೀವು ಹೇಗೆ ನೋಡಲು ಸಾಧ್ಯವಾಗುತ್ತದೆ? ಇಲ್ಲಿದೆ ವಿವರ

ನೋಂದಣಿ ಮತ್ತು ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತದೆ

ಸರ್ಕಾರವು ನಿಮಗಾಗಿ ಬೇರೊಂದು ಸೌಲಭ್ಯವನ್ನು ಮರುಸ್ಥಾಪಿಸಿದೆ ಎಂಬುವುದು ಉಲ್ಲೇಖನೀಯ. ಮತ್ತೊಮ್ಮೆ ನಿಮ್ಮ ಮೊಬೈಲ್ ಸಂಖ್ಯೆಯಿಂದ ನಿಮ್ಮ ಸ್ಥಿತಿಯನ್ನು ಪರಿಶೀಲಿಸಬಹುದು. 

ನೀವು PM ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೋಂದಾಯಿಸಿದ ತಕ್ಷಣ ನಿಮ್ಮ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.

 ನಿಮ್ಮ ಅರ್ಜಿಯ ಸ್ಥಿತಿ, ಬ್ಯಾಂಕ್ ಖಾತೆಗೆ ಎಷ್ಟು ಕಂತು ಬಂದಿದೆ ಇತ್ಯಾದಿ. ಈ ಹಿಂದೆ ಯಾವುದೇ ರೈತರು ಪಿಎಂ ಕಿಸಾನ್ ಪೋರ್ಟಲ್‌ಗೆ ಹೋಗಿ ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಸ್ಟೇಟಸ್‌ ಮಾಹಿತಿಯನ್ನು ಪಡೆಯಬಹುದು.

ನಂತರ, ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯಿಂದ ಸ್ಥಿತಿಯನ್ನು ನೋಡುವ ಸೌಲಭ್ಯವನ್ನು ನಿಲ್ಲಿಸಲಾಯಿತು. ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಮಾತ್ರ ಸ್ಥಿತಿಯನ್ನು ಪರಿಶೀಲಿಸಲು ನಿಯಮವನ್ನು ಮಾಡಲಾಗಿದೆ.

  ಆದರೆ ಇದೀಗ ಆಧಾರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ತೆಗೆದು ಮೊಬೈಲ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ.

इसी प्रकार से पीएम किसान योजना की लेटेस्ट खबर प्राप्त करने के लिए निचे दी गयी लिंक पर क्लिक करें.