PM Kisan ರೈತರಿಗೆ ಸಿಹಿ ಸುದ್ದಿ : ಈ ನಂಬರ್​ಗೆ ಕರೆ ಮಾಡಿ, ಖಾತೆಗೆ ಹಣ ಯಾವಾಗ ಬರುತ್ತೆ ತಿಳಿಯಿರಿ!

PM Kisan Yojana Update : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತುಗಾಗಿ ಕಾಯುತ್ತಿರುವ ಎಲ್ಲಾ ರೈತರಿಗೆ ಸಿಹಿ ಸುದ್ದಿಯೊಂದು ಸರ್ಕಾರ ನೀಡಿದೆ. 

ನಿಮ್ಮ ಖಾತೆಗೆ ಮುಂದಿನ ಕಂತಿನ ಹಣ ಯಾವ ದಿನ ಬರುತ್ತದೆ ಎಂದು ನೀವು ಸಹ ಯೋಚಿಸುತ್ತಿದ್ದರೆ, ಈ ನಂಬರ್​ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರವು 12 ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಬಹುದು.

 ಅಂದರೆ, ಶೀಘ್ರದಲ್ಲೇ ಕೋಟ್ಯಂತರ ರೈತರ ಖಾತೆಗೆ 2000 ರೂಪಾಯಿ ಕಂತು ಬರಬಹುದು. ಈ ಬಗ್ಗೆ ಸರಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಾಗಿ ಮಾಡಿದ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ದೇಶದ ರೈತರು 155261 ಗೆ ಕರೆ ಮಾಡಬಹುದು ಎಂದು ಅಗ್ರಿಕಲ್ಚರ್ ಇಂಡಿಯಾ ತನ್ನ ಅಧಿಕೃತ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. 

ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. 

ಪಿಎಂ ಕಿಸಾನ್ ಯೋಜನೆಯ ಲಾಭವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.

इसी प्रकार से पीएम किसान योजना की लेटेस्ट खबर प्राप्त करने के लिए निचे दी गयी लिंक पर क्लिक करें.