PM Kisan Update: ಈ ದಿನ ರೈತರ ಖಾತೆ ಸೇರಲಿದೆ 12ನೇ ಕಂತು, ಟ್ವೀಟ್ ಮೂಲಕ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ

PM Kisan 12th Installment Update: ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ಈ ಸುದ್ದಿ ನಿಮಗೆ ಭಾರಿ ನೆಮ್ಮದಿ ನೀಡಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತನ್ನು ಪಿಎಂ ಮೋದಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಟ್ವೀಟ್ ವೊಂದನ್ನು ಮಾಡುವ ಮೂಲಕ, 'ದೇಶವು ನಮ್ಮ ರೈತ ಬಾಂಧವರು ಹಾಗೂ ಭಗಿನಿಯರ ಬಗ್ಗೆ ಹೆಮ್ಮೆಪಡುತ್ತದೆ. ಅವರು ಬಲಿಷ್ಠರಾದಷ್ಟು, ನಮ್ಮ ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ನೀಡುತ್ತಿರುವುದು ನನಗೆ ಖುಷಿ ತಂದಿದೆ' ಎಂದು ಹೇಳಿದ್ದರು.

ಪಿಎಂ ಕಿಸಾನ್‌ ಸಮ್ಮಾನ್ ನಿಧಿಯ 12ನೇ ಕಂತು ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ.

ವಾಸ್ತವದಲ್ಲಿ ಈ ಯೋಜನೆಯಡಿಯಲ್ಲಿ, ರೈತರಿಗೆ ವರ್ಷದ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ವರ್ಗಾಯಿಸಲಾಗುತ್ತದೆ ಮತ್ತು ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ಮತ್ತು ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ.

  ಇದರಂತೆಯೇ ಪಿಎಂ ಕಿಸಾನ್ ನ 12ನೇ ಕಂತು ಮುಂದಿನ ತಿಂಗಳಲ್ಲಿ ರೈತರ ಖಾತೆಗೆ ಬರಬಹುದು.

इसी प्रकार से पीएम किसान योजना की लेटेस्ट खबर प्राप्त करने के लिए निचे दी गयी लिंक पर क्लिक करें.